ಸ್ಥಾನ ಪಲ್ಲಟ

ಕವಿತೆ ಸ್ಥಾನ ಪಲ್ಲಟ ಡಾ. ನಿರ್ಮಲಾ ಬಟ್ಟಲ ದಶಕಗಳೆ ಕಳೆದುಹೋದವುಒಲೆ ಊದುವುದು ನಿಂತುಹೋಗೆ ಹಿಡಿಯುವುದು ನಿಂತುಸುಡುವುದು ನಿಂತಿಲ್ಲ…‌! ಇಗೋ….ಎಸರಿಡುವುದೆಮರೆತುಹೋಗಿದೆಪ್ರೆಶರ್ ಕುಕ್ಕರಿನಲ್ಲಿ ಹಾಕಿಕೂಗು ಹೋಡೆಸುವುದಷ್ಟೆಒತ್ತಡದಲಿ ಬೇಯುವುದು ನಿಂತಿಲ್ಲ…! ರೊಟ್ಟಿ ಬೇಯಿಸುವಾಗಮುಂಗೈಗೆ ಬೀಳುವಹೆಂಚಿನ ಬರೆಗಳಿಗ ಕಂಡಿಲ್ಲಾ…ಕಾಣದ ಬರೆಗಳು ಮನಸ ತುಂಬಾಬಿಳುವುದು ನಿಂತಿಲ್ಲ….! ಮನೆಯೊಡತಿ ಎಂದುಹೊರಗೆ ಬಿಗೀದರುಒಳ ಒಳಗೆ ದಾಸ್ಯ ಒಪ್ಪಿ ಕೊಳ್ಳುವುದು ನಿಂತಿಲ್ಲಾ…! ಏನೆಲ್ಲಾ ಬದಲಾಗಿಏನೆನೋ ಹೊಸದಾಗಿಬಂದು ಹಳೆಯದೆಲ್ಲ ಬದಲಾದರೂಬಸಿರುಹೊರುವುದು ನಿಂತಿಲ್ಲ….!! ಆಕಾಶಕ್ಕೆ ಹಾರಿದರೂಪಾತಾಳಕ್ಕೆ ಇಳಿದರೂಕುಕ್ಕುವ ಮುಕ್ಕುವದಾಳಿಗಳಿನ್ನು ನಿಂತಿಲ್ಲ….! ಹೆಣ್ಣೆಂದು ಪ್ರತಿ ಘಳಿಗೆಹಣ್ಣು ಮಾಡುವ,ಎತ್ತರಿಸಿದ ಧ್ವನಿ ಕತ್ತರಿಸಿಭ್ರೂಣಗಳ ಹೂಳುವುದುನ್ನುನಿಂತಿಲ್ಲ….! *******************************